ಮೇಡೆ / forum

ಈ ಮೇಡೆ ಇರುವುದು ಕರುನಾಡು ಹಾಗೂ ಕನ್ನಡಿಗರಿಗೆ ಅನ್ವಯಿಸುವ ದ್ರಾವಿಡ ವಿಶಯಗಳ ಚರ‍್ಚೆಗಾಗಿ. ಬಿರ‍್ದಿಗರು ಯಾವುದಾದರೊಂದು ವಿಶಯವನ್ನು ಆಯ್ಕೆ ಮಾಡಿ ಅದರ ಬಗ್ಗೆ ತಮ್ಮ ಅನಿಸಿಕೆಗಳ ಕೊಡುಕೊಳುವನ್ನು ನಡೆಸಬಹುದು.
ಬರಹಗಳು ಕನ್ನಡ ಇಲ್ಲವೆ ಇಂಗ್ಲೀಶಿನಲ್ಲಿ ಇರಬಹುದು. ವಾದವಿವಾದಗಳು ಸಬ್ಯತೆಯ ಮೇರೆಯನ್ನು ಮೀರಬಾರದು.
ನಿಮ್ಮ ಅನಿಸಿಕೆಗಳನ್ನು ತಿಳಿಸುವುದಕ್ಕೆ ಪುಟದ ಕೆಳಬಾಗದಲ್ಲಿರುವ ಕಾಮೆಂಟ್‍ಸ್ ಸವ್‍ಲಬ್ಯವನ್ನು ಬಳಸಿರಿ.

This forum is for discussing dravidian issues related to karnataka and kannadigas. Guests may choose a topic and engage in discussions on it. Medium of discussion may be either Kannada or English. Care must be taken to keep the arguments civil at all times. Use the comments facility at the bottom of this page to express your arguments.



ಕೊಡುಕೊಳುವನ್ನು ತೊಡಗಿಸಲು, ನಮ್ಮ ಮೆಟ್ರೋ ರಯಿಲು ಏರ‍್ಪಾಡಿನಲ್ಲಿ ಬೆಂಗಳೂರಿಗರ ನಡುವೆ ಹಿಂದಿ ತೂರಿಸಿರುವ ವಿಶಯವನ್ನು ಮೊದಲು ಕಯ್ಗೆತ್ತಿಕೊಂಡರೆ ಹೇಗೆ?
ಹಿಂದಿ ಅದಿಕ್ರುತವಾಗಿ ರಾಶ್ಟ್ರಬಾಶೆಯಲ್ಲ. ಹಾಗಾಗಿ ಅದನ್ನು ಮೆಟ್ರೋದಲ್ಲಿ ಬಳಸಬೇಕಾಗಿಲ್ಲ. ಕೇಳ್‍ವಿ ಇದು - ಹಿಂದಿಯನ್ನು ತೆಗೆದು ಹಾಕುವ ಕೆಲಸ ಯಾರಿಂದ ಆಗಬೇಕು? ಕನ್ನಡಿಗರಿಂದ ಮಾತ್ರವೋ, ಇಲ್ಲ, ಬೆಂಗಳೂರಿನಲ್ಲಿ ದ್ರಾವಿಡ ನುಡಿಗಳನ್ನು ಆಡುವ ಎಲ್ಲರಿಂದಲೋ?

How about the issue of removing Hindi from Namma Metro of Bangalore for a starter?
The way I see it, use of Hindi on the Metro is totally unwarranted. Hindi is not officially the national language of our country. So, that makes it just another regional language in a technical sense. Therefore, there is no justification for the use of it on the Metro. Hindi must go. But the question is, who should make the effort to get it removed? Kannadigas single handedly, or all Dravidian speakers of Bangalore collectively?

ಕಾಮೆಂಟ್‌ಗಳಿಲ್ಲ: