ಶ್‍ರೀವರೆ

ಇದು ಕನ್‍ನಡದ ಕಣ್‍ವ ಶ್‍ರೀ ಬೀ.ಎಮ್.ಶ್‍ರೀಕಂಠಯ್‍ಯನವರು ಕನ್‍ನಡ ನುಡಿಗಾಗಿ ಕೊಡಮಾಡಿದ ಲಿಪಿಯ ಬಳಕೆಗಾಗಿ ಮೀಸಲಿಟ್‍ಟ ಪುಟ. ಈ ಲಿಪಿಯನ್‍ನು ಶ್‍ರೀವರೆ ಎಂದು ಕರೆದಿದ್‍ದೇನೆ (ಇದು ಬೀ.ಎಮ್.ಶ್‍ರೀಯವರ ಕಾವ್‍ಯನಾಮ ’ಶ್‍ರೀ’ ಮತ್‍ತು ಲಿಪಿ ಎನ್‍ನುವುದಕ್‍ಕೆ ಅಚ್‍ಚಗನ್‍ನಡದ ಸೊಲ್‍ಲು ’ಬರೆ’ - ಇವೆರಡರ ಕೂಡಲು). ದೀರ‍್ಗ ಸೂಚಿಸುವ, ’ಅಜ್‍ಜನ ಕೋಲು’ ಎಂದು ಕರೆಯುವ ಚಿನ್‍ನೆಯನ್‍ನು ಬಿಡಿಯಾಗಿ ಬರೆಯಲು ಈ ತಾಣದ ಎಡಿಟರ್ ಬಿಡುವುದಿಲ್‍ಲ ಎಂದುಕೊಂಡಿದ್‍ದೇನೆ. ಹಾಗಾಗಿ, ಶ್‍ರೀವರೆಯನ್‍ನು ಬೀ.ಎಮ್.ಶ್‍ರೀಯವರು ಹೇಳಿದಂತೆಯೇ ನೆರೆಯಾಗಿ ಇಲ್‍ಲಿ ಬರೆಯುವುದು ಆಗುವುದಿಲ್‍ಲ. ಆದರೂ, ಒತ್‍ತಕ್‍ಶರ ಇಲ್‍ಲದಂತೆ ಬರೆಯಬಹುದು. ಸದ್‍ಯಕ್‍ಕೆ ಅಶ್‍ಟರಿಂದಲೇ ತಣಿಯಬೇಕಾಗಿದೆ. ಶ್‍ರೀವರೆಯ ಅಬಿಮಾನಿಗಳು ಶ್‍ರೀವರೆಯನ್‍ನು ಬಳಸಿಕೊಂಡು ಪುಟ್‍ಟ ಬರಹಗಳನ್‍ನು ಬರೆದು ಕಳಿಸಿದರೆ, ಅವನ್‍ನು ಈ ಪುಟದಲ್‍ಲಿ ಪ್‍ರಕಟಿಸುತ್‍ತೇನೆ.

ಕಾಮೆಂಟ್‌ಗಳಿಲ್ಲ: